ಮೊದಲನೇ ವಾರದ ಅತಿಥಿಯಾಗಿ ರವಿಚಂದ್ರನ್ ನಮ್ಮ ಮನಸ್ಸು ಗೆದ್ದರು. ಎರಡನೇ ವಾರಾಂತ್ಯಕ್ಕೆ ನಮ್ಮ ವೇದಿಕೆ ಮೇಲೆ ನಮ್ಮ ಮೈಸೂರಿನ ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್ ಆಗಮಿಸಿದರು. ಹಾಡಿನ ಮೂಲಕ ಎಂಟ್ರೀ ಕೊಟ್ಟ ಪ್ರಕಾಶ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡು, ತಾವು ನಡೆದು ಬಂದ ಹಾದಿಯನ್ನು ಹಂಚಿಕೊಂಡರು.
ಶರೀರಕ್ಕೆ ತಕ್ಕ ಶಾರೀರ, ತಮ್ಮ ನಟನೆಯಿಂದ ಎಲ್ಲರನ್ನು ಬೆರೆಗುಗೊಳಿಸುವ ದಕ್ಷಿಣ ಭಾರತದ ನಟ ರವಿ ಶಂಕರ್ ವೇದಿಕೆಗೆ ಕೆಂಪೇಗೌಡ ಚಿತ್ರದ ಸಂಭಾಷಣೆಯೊಂದಿಗೆ ಕಾಲಿಟ್ಟಾಗ ಪ್ರೇಕ್ಷಕರಿಗೆ ಆಗಿದ ಅನುಭವಕ್ಕೆ "ರೋಮಾಂಚನ" ಎಂದರೆ ತಪ್ಪೇನಾಗುವುದಿಲ್ಲ. ರವಿಶಂಕರ್ ಕಂಠದಾನ ಕಾಲವಿದರಾಗಿ ಹಲವಾರು ಪ್ರಶಸ್ತಿ ಪಡೆದಿರುವ ಬಗ್ಗೆ ನಮಗೆಲ್ಲಾ ತಿಳಿದಿದೆ. ಆದರೆ, ಅವರು ಒಬ್ಬ ಗಾಯಕನು ಹೌದೆಂದು ನಿರೂಪಿಸಿದಾಗ ವೇದಿಕೆ ಅದಕ್ಕೆ ಸಾಕ್ಷಿಯಾಗಿತ್ತು. ಚಂದನದ ಗೊಂಬೆ ಚಲನಚಿತ್ರದ ಹಾಡೊಂದನ್ನು ಹಾಡಿದಾಗ ಎಲ್ಲರೂ ಆಶ್ಚರ್ಯ ವ್ಯಕ್ತವಾದರೆ, ವಿಜಯ್ ಪ್ರಕಾಶ್ ಜೊತೆ ಕೂಡಿ ತಮ್ಮ ಗುರುಗಳ ತಿಲ್ಲಾನ ಹಾಡಿದಾಗ ಅವರ ಧೈತ್ಯ ಪ್ರತಿಭೆ ಅನಾವರಣಗೊಂಡಿತು.
ಮನೆಯೊಳಗೆ ಸಂತೋಷ್ RJ ರೋಹಿತ್ ಬಗ್ಗೆ ಮೆಚ್ಚುಗೆಯ ಮಾತನಾಡಿದಾಗ, ಎಲ್ಲೋ ಒಂದು ಕಡೆ ಮನಸ್ತಾಪಗಳು ಕಡಿಮೆ ಆಗುತ್ತಿರುವ ಲಕ್ಷಣಗಳು ಕಂಡವು. ನಾಯಕ ಆದಿ, ರೋಹಿತ್ ಹೆಸರನ್ನು ನೇರವಾಗಿ ನಾಮಿನೇಟ್ ಮಾಡಿದ್ದಕ್ಕೆ ರೋಹಿತ್ ಆಕ್ಷೇಪ ವ್ಯಕ್ತಪಡಿಸಿದರು.
ಸೃಜನ್ ಎಂದಿನಂತೆ ಎಲ್ಲರನ್ನೂ ಅನುಕರಣೆ ಮಾಡಿ ನಗಿಸುತ್ತಿದರು. Commando ಟಾಸ್ಕ್ ಗೆ ರೋಹಿತ್ ಅನ್ನು ನಾಯಕನಾಗಿ ನೇಮಕ ಮಾಡಿದ ಬಿಗ್ ಬಾಸ್. ನಂತರ ಬಂಡಾಯ ಪಡೆಯ ನಾಯಕಿಯಾಗಿ ನೀತು ಅನ್ನು ನೇಮಿಸಿದರು.
ರೋಹಿತ್ ಮಾತು ಮೀರಿದಕ್ಕೆ ಸಂತೋಷ್ ಅವರಿಗೆ "ಕಮ್ಯಾಂಡರ್ ರೋಹಿತ್ ಗೆ ಜೈ" ಎಂದು ೨೦ ರೌಂಡ್ ಸುತ್ತುಹಾಕುವ ಶಿಕ್ಷೆ ಲಭಿಸಿತು. ಆದಿ ಮತ್ತು ಮಯೂರ್ ನಡುವೆ ಭಿನ್ನಾಭಿಪ್ರಾಯ ಶುರುವಾಯಿತು. ಎರಡು ಬಾರಿ ನಾಮಿನೇಟ್ ಆದರೂ ಸೇಫ್ ಆಗಿರುವುದು ದೊಡ್ಡ ಸಾಧನೆ ಎಂದು ಮಯೂರ್ ರೋಹಿತ್ ಗೆ ಹುರಿದುಂಬಿಸಿದರು.
ಆದಿಯ ನಾಯಕತ್ವ ಮುಗಿದಾದ ನಂತರ ಅಕುಲ್ ಅವರನ್ನು ನಾಯಕನಾಗಿ ನೇಮಕ ಮಾಡಿದರು. ನೂತನ ನಾಯಕ ಅಕುಲ್ ಅವರನ್ನು ರಂಜಿಸಲು ಮನೆಯ ಉಳಿದವರಿಗೆ ಬಿಗ್ ಬಾಸ್ ಆದೇಶ ಮಾಡಿದರು. ದೀಪಿಕಾ ನೃತ್ಯದ ಮೂಲಕ ಮನೋರಂಜನೆಗೆ ನಾಂದಿ ಆಡಿದರೆ, ಉಳಿದವರು ಒಂದು ಕಿರು ನಾಟಕದಿಂದ ಹಾಸ್ಯದ ಹೊನಲು ಸೃಷ್ಟಿಸಿದರು. ಶ್ವೇತಾ ಮತ್ತು ಅನುಪಮಾ ಮಾಡಿದ ಮೋಹಕ ನೃತ್ಯದಿಂದ ಮುಕ್ತಾಯ ಮಾಡಲಾಯಿತು.

No comments:
Post a Comment