ಹರ್ಷಿಕಾ ಅವರ ಆಗಮನ ಮನೆಯಲ್ಲಿ ಒಂದು ಸಣ್ಣ ಕೋಲಾಹಲಕ್ಕೆ ನಾಂದಿ ಮಾಡಿತು. ಬಂದ ತಕ್ಷಣವೇ ಅವರಿಗೆ ಬಿಗ್ ಬಾಸ್, ನೇರವಾಗಿ ೪ ಜನರನ್ನು ನಾಮಿನೇಟ್ ಮಾಡಲು ಸೂಚಿಸಿದರು. ಅದರಂತೆ, ಹರ್ಷಿಕಾ ಅವರು ಸೃಜನ್, ಮಯೂರ್, ಶ್ವೇತಾ ಮತ್ತು ಅನುಪಮಾ ಅವರನ್ನು ನಾಮಿನೇಟ್ ಮಾಡಿದರು.
ಹರ್ಷಿಕಾ ಅವರ ಕಡೆಯಿಂದ ಬಂದ ಉತ್ತರಗಳು ಮನೆಯಲ್ಲಿ ಸಣ್ಣ ಅತೃಪ್ತ ಅಲೆಯನ್ನು ಸೃಷ್ಟಿಸಿತು. ಈ ಮಧ್ಯೆ ಗುರು ಅವರು ತಮ್ಮ ತಾಳ್ಮೆ ಕಳೆದುಕೊಂಡು ಬಿಗ್ ಬಾಸ್ ಮನೆಯಿಂದ ಹೊರ ಜಿಗಿಯಲು ವಿಫಲ ಯತ್ನ ನಡೆಸಿದರು. ಈ ಸಮಯದಲ್ಲಿ ಗುರು ಅವರನ್ನು ತಡೆಯುವ ಯತ್ನ ಮಾಡಿದ್ದು ಅಕುಲ್, ಆದಿ ಮತ್ತು ಸಂತೋಷ್.
ಇದೆಲ್ಲಾ ಡ್ರಾಮ ಮುಗಿದ ನಂತರ, ಡ್ಯಾನ್ಸ್ ಹೇಳಿಕೊಡುವಂತೆ ಗುರು ಅಕುಲ್ ಅವರನ್ನು ಕೇಳಿಕೊಂಡು ಕೆಲವು ಹೆಜ್ಜೆ ಹಾಕಿದರು. ಇದಕ್ಕೆ ಸಾಥ್ ನೀಡಿದ್ದು ನಿಂಬೆ ಹಣ್ಣಿನ ಹುಡ್ಗಿ ಹರ್ಷಿಕಾ..
ತದನಂತರ ಧಮ್ ಟಾಸ್ಕ್ ಶುರುವಾಯಿತು. ಟೀಮ್ A ಹರ್ಷಿಕಾ, ದೀಪಿಕಾ, ಅಕುಲ್, ಸಂತೋಷ್ ಮತ್ತು ಆದಿ ಅವರನ್ನು ಒಳಗೊಂಡರೆ ಉಳಿದವರು ಟೀಮ್ B ಸ್ಪರ್ಧಿಗಳಾಗಿದ್ದರು.
ಅಂಕಗಳಿಗಾಗಿ ನಡೆದ ಟಾಸ್ಕ್ ತುಂಬಾ ಘರ್ಷಣೆಗಳಿಗೆ ಮೌನ ಸಾಕ್ಷಿಯಾಯಿತು. ಟಾಸ್ಕ್ ನೀಡುವ ವೇಳೆ ಅಕುಲ್ ಮತ್ತು ಸೃಜನ್ ಮಾತುಕತೆ ತಾರಕಕ್ಕೆ ಏರಿದರೆ, ಗುರು ಅವರು ತಮ್ಮ ಕೇಶವನ್ನು ತೆಗಿಸಿದರೆ ಎಂದು ಅಕುಲ್ ಹೇಳಿದಾಗ ಎಲ್ಲರಲ್ಲೂ ಎಲ್ಲೋ ಒಂದು ಕಡೆ ದುಗುಡ ವ್ಯಕ್ತವಾಯಿತು.
ಗುರು ಅವರನ್ನು ಅದರಿಂದ ಪಾರು ಮಾಡಿದ್ದು, ಸೃಜನ್. ಅವರು ಸ್ವಯಂ ಪ್ರೇರಿತರಾಗಿ ಗುರುಗಳ ಹತ್ತಿರ ಮನವಿ ಮಾಡಿಕೊಂಡು ತಮ್ಮ ಕೇಶವನ್ನು ಕ್ಷೌರ ಮಾಡಿಸಿಕೊಂಡು ಮಾನವೀಯತೆ ಮೆರೆದರು.
ಮೂವತ್ತು ಅಂಕಗಳಿಗೆ ತಮ್ಮ ಕೂದಲು ಕೊಟ್ಟಿದಕ್ಕೆ ಗುರು ಸೃಜನ್ ಅವರನ್ನು ವ್ಯಂಗ್ಯ ಮಾಡಿದಕ್ಕೆ ಮುಂದೆ ಮನೆಯಲ್ಲಿ ಒಂದು ಚಿಕ್ಕ ನಾಟಕ ನೋಡಬೇಕಾಯಿತು. ಅಕುಲ್ ಎಂದಿನಂತೆ ಟಾಸ್ಕ್ ನಲ್ಲಿ ಎದುರಾಳಿಗಳನ್ನು ಕಿಚ್ಚಯಿಸುತ್ತಾ ಅವರ ತಾಕತ್ತನ್ನು ಪ್ರದರ್ಶಿಸಲು ಉತ್ತೇಜುಸುತ್ತಿದರು.
ಈಜು ಕೊಳದ ಪಕ್ಕ ನಡೆಯುವ ಸವಾಲನ್ನು ಸಮರ್ಥವಾಗಿ ಎದುರಿಸಿದ ಶ್ವೇತಾ ತಮ್ಮ ತಂಡಕ್ಕೆ ಒಳ್ಳೆಯ ಸಾಥ್ ನೀಡಿದರು.ಈ ಮಧ್ಯೆ ತಮ್ಮ ತಾಳ್ಮೆ ಕಳೆದುಕೊಂಡು ಅಕುಲ್ ವಾಗ್ವಾದ ಶುರುಮಾಡಿದಾಗ, ಬಹಳ ತಾಳ್ಮೆಯಿಂದ ಗುರು ಅಕುಲ್ ಅವರನ್ನು ಛೇಡಿಸುತ್ತಿದ್ದರು. ಈ ಟಾಸ್ಕ್ ಮನೆಯೊಳಗಿನ ಪ್ರಥಮ ಮಹಿಳಾ ಕಲಹಕ್ಕೂ ನಾಂದಿ ಹಾಡಿತು. ಶ್ವೇತಾ ಮತ್ತು ಹರ್ಷಿತಾ ನಡುವಿನ ವಾಗ್ವಾದ ಬೇರೆಯವರನ್ನು ಬೆರಗುಗೊಳಿಸಿತು.
ಸೃಜನ್ ತಂಡ ನೀಡಿದ ಟಾಸ್ಕ್ ಗಳನ್ನು ಅಕುಲ್ ಮುನ್ನಡೆಸಿದ ತಂಡ ಪರಿಪೂರ್ಣಿಸದೆ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.ಹರ್ಷಿಕಾ ನಾಯಕಿಯಾಗಲು ತಮ್ಮ ಯೋಜನೆಗಳನ್ನು ಶುರು ಮಾಡಿದರು.ಆರಂಭದಲ್ಲಿ ಗುರು ಅವರಿಗೆ ಅನುಮಾನವಿದ್ದರೂ, ಕೊನೆಗೆ ಉಳಿದವರು ಮಾಡಿದ ಅತ್ಯುತ್ತಮ್ಮ ನಟನೆಗೆ ಬಲಿಪಶುವಾದರು.
No comments:
Post a Comment